ಬಾಗಲಕೋಟೆ:- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಂಯುಕ್ತ ಪಾಟೀಲ್ ಪರವಾಗಿ ಬಾಗಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ಬೇನೂರ ಅವರ ನೇತೃತ್ವದಲ್ಲಿ ನಡೆಸಿದ ಪ್ರಚಾರದಲ್ಲಿ ಮುಖಂಡರು ಭಾಗಿಯಾಗಿ ಬಿರುಸಿರನ ಪ್ರಚಾರ ನಡೆಸಿದರು
ಶುಕ್ರವಾರ ಬೆಳಗ್ಗೆ 7 ಗಂಟೆಗೆ ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 2,3 ಮತ್ತು 12 ರಲ್ಲಿ ಪ್ರತಿ ಮನೆಗಳಿಗೆ ಮುಖಂಡರಾದ ಅಕ್ಬರ್ ಮುಲ್ಲಾ, ಹಾಜಿಸಾಬ್ ದಂಡಿನ್, ಆರಿಫ್ ಢಾಲಾಯತ್, ಇಬ್ರಾಹಿಂ ಕಲಾದಗಿ, ತಿಪ್ಪಣ್ಣ ನೀಲನಾಯಕ, ಫಿರೋಜ್ ಜಮಾದಾರ್, ಬಿಲಾಲ್ ತಾಳಿಕೋಟಿ, ಅಲ್ತಾಫ್ ಯಾದ್ವಾಡ, ಖಾಜಾ ಅಮನ, ಅಲ್ತಾಫ್ ಭಾಯಿ, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರವಾಗಿ ಮತಯಾಚನೆ ಮಾಡಿದರು