ಬೆಂಗಳೂರು ಸಭೆಯಲ್ಲಿ ‘ಜಯ ಕರ್ನಾಟಕ ಜನಪರ ವೇದಿಕೆ’ — ವಿಜಯಪುರ ಮುಖಂಡರಿಗೆ ಸದಸ್ಯತ್ವ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ *ಜಯ ಕರ್ನಾಟಕ ಜನಪರ ವೇದಿಕೆ* ಸಂಘಟನೆಯ ಸದಸ್ಯತ್ವ ವಿಸ್ತರಣಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು.
ಸಂಸ್ಥಾಪಕ ಅಧ್ಯಕ್ಷ ಸನ್ಮಾನ್ಯ ಶ್ರೀ ಬಿ. ಗುಣರಂಜನ ಶೆಟ್ಟಿ, ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ, ರಾಜ್ಯ ಕಾರ್ಯಾಧ್ಯಕ್ಷ ಹೆಚ್. ರಾಮಚಂದ್ರಯ್ಯ, ರಾಜ್ಯ ಪ್ರಧಾನ ಸಂಚಾಲಕ ರಾಧಾಕೃಷ್ಣ ಅವರು ಸಭೆಯಲ್ಲಿ ಭಾಗವಹಿಸಿದ ವಿಜಯಪುರ ಜಿಲ್ಲೆಯ ಹಲವು ಮುಖಂಡರಿಗೆ ಸಂಘಟನೆಯ ಶಾಲು ಹಾಕಿ ಸದಸ್ಯತ್ವ ನೀಡಿ ಅವರನ್ನು ಅಧಿಕೃತವಾಗಿ ಸಂಘಟನೆಯಲ್ಲಿ ಸೇರಿಸಿಕೊಂಡರು.
ಸಭೆಯಲ್ಲಿ ಸಂಘಟನೆಯ ಭವಿಷ್ಯತಾಯಕ ಯೋಜನೆಗಳು, ಜಿಲ್ಲಾ ಮಟ್ಟದ ಚಟುವಟಿಕೆಗಳು ಹಾಗೂ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕುರಿತು ನಾಯಕರು ಪ್ರಮುಖ ಸಲಹೆ–ಸೂಚನೆಗಳನ್ನು ನೀಡಿದರು. ಕರ್ನಾಟಕಪರ ಹೋರಾಟವನ್ನು ಗ್ರಾಮ–ತಾಲೂಕ ಮಟ್ಟಕ್ಕೆ ತಲುಪಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಸವರಾಜ ಸಿಂಗನಹಳ್ಳಿ, ಬಾಪುಗೌಡ ಪಾಟೀಲ, ರೇವಣಸಿದ್ದ ಬಿ. ಮಣ್ಣೂರ,ರುದ್ರೇಶ ಮುರಾಳ, ಹಣಮಂತ್ರಾಯ ಗುತ್ತೆದಾರ ಸೇರಿದಂತೆ ಅನೇಕ ತಾಲೂಕು ಮುಖಂಡರು, ಕನ್ನಡಪರ ಸೇನಾನಿಗಳು ಹಾಗೂ ಹಿರಿಯರು ಭಾಗವಹಿಸಿದ್ದರು.
ಬೆಂಗಳೂರು ಸಭೆಯ ಮೂಲಕ ವಿಜಯಪುರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸ ನಾಯಕರು ವ್ಯಕ್ತಪಡಿಸಿದರು.