ಬೆಂಗಳೂರು: ಮಾಜಿ ಡಿಸಿಎಂ (Former DCM) ಕೆಎಸ್ ಈಶ್ವರಪ್ಪ (KS Eshwarappa) ಅವರನ್ನು ಬಿಜೆಪಿಯಿಂದ (BJP) ಉಚ್ಛಾಟನೆ (expelled) ಮಾಡಲಾಗಿದೆ. ಶಿವಮೊಗ್ಗದಿಂದ (Shivamogga) ಬಿಜೆಪಿ ಅಭ್ಯರ್ಥಿ (BJP Candidate) ಬಿವೈ ರಾಘವೇಂದ್ರ (BY Raghavendra) ವಿರುದ್ಧ ಬಂಡಾಯವೆದ್ದು ಲೋಕಸಭೆ ಚುನಾವಣೆಯಲ್ಲಿ (Lok Sabha Election) ಸ್ಪರ್ಧಿಸುತ್ತಿರುವ ಕಾರಣ ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಈಶ್ವರಪ್ಪ ಅವರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟಿಸಿ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿದೆ.
ಬಿಜೆಪಿಯಿಂದ ಕೆಎಸ್ ಈಶ್ವರಪ್ಪ ಉಚ್ಛಾಟನೆ
ಮಾಜಿ ಡಿಸಿಎಂ ಹಾಗೂ ಶಿವಮೊಗ್ಗ ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಮುಂದಿನ 6 ವರ್ಷಗಳ ಕಾಲ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಶಿಸ್ತು ಸಮಿತಿ ಆದೇಶ ನೀಡಿದೆ.