- Home
- ಇದುವರೆಗೆ ಬೆಂಗಳೂರಿನಲ್ಲಿ ಸೀಜ್ ಆಗಿರೋ ಹಣ, ಚಿನ್ನ, ಬೆಳ್ಳಿ, ಕೇಸ್ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್
ಇದುವರೆಗೆ ಬೆಂಗಳೂರಿನಲ್ಲಿ ಸೀಜ್ ಆಗಿರೋ ಹಣ, ಚಿನ್ನ, ಬೆಳ್ಳಿ, ಕೇಸ್ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್
BY BBMP2024
- 0 COMMENTS
- READ IN 1 MINUTE

ಬೆಂಗಳೂರು: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಮುಕ್ತಾಯಗೊಂಡಿತ್ತು. ಇದಕ್ಕೂ ಮುನ್ನಾ ರಾಜ್ಯದಲ್ಲಿ ಚುನಾವಣಾ ಅಕ್ರಮ ತಡೆಗೆ ಆಯೋಗ ಹದ್ದಿನ ಕಣ್ಣಿಟ್ಟಿತ್ತು. ಹಾಗಾದ್ರೇ ಬೆಂಗಳೂರಲ್ಲಿ ಇದುವರೆಗೆ ಸೀಜ್ ಆಗಿರೋ ಹಣ, ಚಿನ್ನ, ಬೆಳ್ಳಿ ಎಷ್ಟು ಅಂತ ಮುಂದೆ ಓದಿ.
ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ನಿನ್ನೆಯಷ್ಟೇ ಮೊದಲ ಹಂತದಲ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬೆಂಗಳೂರಲ್ಲಿ ಚುನಾವಣಾ ಅಕ್ರಮ ತೆಡೆಗೆ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಇದರ ನಡುವೆ ಅಕ್ರಮ ಎಸಗೋದಕ್ಕೆ ಪ್ರಯತ್ನ ಪಟ್ಟವರಿಗೆ ಚುನಾವಣಾ ಆಯೋಗವು ಸೀಜ್ ಮಾಡಿ ಶಾಕ್ ನೀಡಿತ್ತು. ಹಾಗಾದ್ರೇ ಎಷ್ಟು ಹಣ, ಬೆಳ್ಳಿ, ಬಂಗಾರ ಸೀಜ್ ಮಾಡಲಾಗಿದೆ ಅಂತ ಕೆಳಗಿದೆ ನೋಡಿ.
ಬೆಂಗಳೂರಿನಲ್ಲಿ ಸೀಜ್ ಆದಂತ ಹಣ ಎಷ್ಟು ಗೊತ್ತಾ?
* 11.85 ಕೋಟಿ ಹಣ ಸೀಜ್
* 19.22 ಕೋಟಿ ಮೌಲ್ಯದ ಮದ್ಯ ವಶ
* 7.15 ಕೋಟಿ ಮೌಲ್ಯದ ಡ್ರಗ್ಸ್ ವಶ
* 53.71 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶ
* 1.14 ಕೋಟಿ ಮೌಲ್ಯದ ಗಿಷ್ಟ್ ವಶ
* 46.37 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಎಷ್ಟು ಕೇಸ್ ದಾಖಲು ಗೊತ್ತಾ?
ದ್ವೇಷದ ಭಾಷಣ ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆಯಿಂದ ಪ್ರಕರಣಗಳು ಕೂಡ ದಾಖಲಾಗಿದೆ. ಬೆಂಗಳೂರು ಸೆಂಟ್ರಲ್- 513, ಬೆಂಗಳೂರು ಉತ್ತರ- 303, ಬೆಂಗಳೂರು ದಕ್ಷಿಣ- 373, ಬೆಂಗಳೂರು ನಗರ- 2929 ಹೀಗೆ ಒಟ್ಟು 4,118 ಪ್ರಕರಣಗಳು ದಾಖಲಾಗಿವೆ.
ಒಟ್ಟಾರೆಯಾಗಿ ಅಕ್ರಮವಾಗಿ, ಹಣ, ಚಿನ್ನ, ಡ್ರಗ್ಸ್ ಸಾಗಾಟ ಜೋರಾಗಿದ್ದನ್ನು ಚುನಾವಣಾ ಆಯೋಗ ಹದ್ದಿನ ಕಣ್ಣು ನೆಟ್ಟು ತಡೆದಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲೂ ಚುನಾವಣೆ ಮುಕ್ತಾಯ ಆಗಿದ್ದು, ಕೋಟಿ ಕೋಟಿ ಮೌಲ್ಯದ ಚಿನ್ನ, ಬೆಳ್ಳಿಯನ್ನ ವಶಪಡಿಸಿಕೊಳ್ಳಲಾಗಿದೆ.