ಚಿತ್ರದುರ್ಗ:ಶ್ರೀನಿವಾಸಪುರ ತಾಲೂಕಿನ ಗೌನಪಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ, ಗ್ರಾಮಸ್ಥರು ಅಮ್ಜದ್ ಅವರ ನೇತೃತ್ವದಲ್ಲಿ ದೀರ್ಘ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಈ ಪಾದಯಾತ್ರೆ ಬೆಳಗಾವಿಯವರೆಗೆ ಸಾಗುತ್ತಿದ್ದು, ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪ್ರದೇಶ ತಲುಪಿದೆ.
ಪಾದಯಾತ್ರೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದು, “ಗೌನಪಳ್ಳಿಗೆ ಪಟ್ಟಣ ಪಂಚಾಯಿತಿ ಗೌರವ ನಮ್ಮ ಹಕ್ಕು” ಎಂಬ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುತ್ತಾ, ತಮ್ಮ ಬೇಡಿಕೆಗೆ ನ್ಯಾಯ ದೊರಕಿಸಿಕೊಳ್ಳುವ ವಿಶ್ವಾಸದೊಂದಿಗೆ ಯಾತ್ರಿಕರು ಪ್ರತಿದಿನ ಹಲವು ಕಿಲೋಮೀಟರ್ ನಡೆದುಕೊಳ್ಳುತ್ತಿದ್ದಾರೆ.
— ವರದಿ KPSF