ಮುದ್ದೇಬಿಹಾಳ,:- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಸಂತ ಕನಕದಾಸ ಜಯಂತಿ ಆಚರಿಸಲಾಯಿತು. ಗ್ರಾಮದ ಸರ್ವ ಸದಸ್ಯರು ಸೇರಿ ಕನಕನ ಪ್ರತಿಮೆಗೆ ದೀಪ ಬೆಳಗುವ ಮೂಲಕ ಭಕ್ತಿ, ನೈತಿಕತೆ ಮತ್ತು ಮಾನವೀಯತೆಯ ಪರಮ ಸಂದೇಶ ನೀಡಿದ ಕನಕನಿಗೆ ಗೌರವ ಸಲ್ಲಿಸಿದರು.
ಸಂತ ಕನಕದಾಸರು ಕನ್ನಡ ನಾಡಿನ ಭಕ್ತಿಪಂಥದ ಮಹಾನ್ ಕವಿ, ಸಂಗೀತಗಾರ ಮತ್ತು ಸಮಾಜ ಸುಧಾರಕರಾಗಿದ್ದರು. ಅವರ ಸಾಹಿತ್ಯದಲ್ಲಿ ಕಂಡುಬರುವ ಸಮಾನತೆ, ಸತ್ಯ, ನ್ಯಾಯ ಹಾಗೂ ಭಕ್ತಿ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. “ನಾನೇನೂ ದೇವರಿಲ್ಲದವನಲ್ಲ, ದೇವರೇ ನನ್ನೊಳಗಿದ್ದಾರೆ” ಎಂಬ ಅವರ ತತ್ತ್ವಭಾವನೆಯು ನಾಡು, ಧರ್ಮ, ಜಾತಿ ಮೀರಿ ಮಾನವೀಯತೆಯ ಬಲವನ್ನು ಸಾರುತ್ತದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹಣಮಂತ ಹಂಡ್ರಗಲ್, ಮಾಜಿ ಉಪಾಧ್ಯಕ್ಷ ಸಿದ್ದು ಪೂಜಾರಿ, ಗ್ರಾಮದ ಮುಖಂಡರಾದ ಚಂದಾಲಿಂಗ ಹಂಡ್ರಗಲ್ಲ, ಮುದಕಪ್ಪ ಮೇಟಿ, ದೇವಪ್ಪ ಪೂಜಾರಿ, ಹನುಮಂತ ಪೂಜಾರಿ, ಮಲ್ಲಪ್ಪ ಕುಂಟೋಜಿ, ಜುಮ್ಮಣ್ಣ ಹೊಕ್ರಾಣಿ, ಬಸವರಾಜ್ ಹೊಕ್ರಾಣಿ, ಮುತ್ತು ಪೂಜಾರಿ, ಮುತ್ತು ಹೊಕ್ರಾಣಿ, ಬಸವರಾಜ್ ಕುಂಟೋಜಿ, ಜಗದೀಶ್ ಇನಚಗಲ್ಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗ್ರಾಮದ ಮಕ್ಕಳಿಂದ ಕನಕದಾಸರ ಭಕ್ತಿ ಗೀತೆಗಳು, ಮಹಿಳೆಯರಿಂದ ಭಜನೆಗಳು ಹಾಗೂ ಯುವಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನಕದಾಸರ ಜೀವನ ತತ್ವಗಳು ಹಾಗೂ ಅವರ ಸಂದೇಶಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಶ್ರಮಿಸಿದ ರೀತಿಯು ಶ್ಲಾಘನೀಯವಾಗಿದೆ.
ಈ ರೀತಿಯ ಕಾರ್ಯಕ್ರಮಗಳು ಗ್ರಾಮೀಣ ಸಮಾಜದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಹಕಾರದ ಮನೋಭಾವ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.
ವರದಿ ಮುತ್ತು ಪೂಜಾರಿ