BANGALORE ಎನ್‌ಸಿಸಿ ದಿನಾಚರಣೆಯ ಅಂಗವಾಗಿ ಸಂಚಾರ ಜಾಗೃತಿ ಕಾರ್ಯಕ್ರಮ

Bhima Samskruthi
By -
0

ಬೆಂಗಳೂರು:ರಾಜಾಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಘಟಕ, ಒಂದನೆಯ ಕರ್ನಾಟಕ ಬೆಟಾಲಿಯನ್ ಹಾಗೂ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಎನ್‌ಸಿಸಿ ದಿನಾಚರಣೆಯ ಅಂಗವಾಗಿ ಸಂಚಾರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀ ಮೊಹಮ್ಮದ್ ಅಲಿ ಅವರು ಮಾತನಾಡಿ, *“ವಿದ್ಯಾರ್ಥಿ ದಶೆಯಲ್ಲಿ ನಾನು ಕೂಡ ಎನ್‌ಸಿಸಿ ಕೆಡೆಟ್ ಆಗಿದ್ದೆ. ಅದೆ ನನ್ನನ್ನು ಪ್ರೇರೇಪಿಸಿ ಎನ್‌ಸಿಸಿ ಕೋಟಾದ ಮೂಲಕ ಇಂದಿನ ಇನ್ಸ್‌ಪેક્ટರ್ ಹುದ್ದೆಗೆ ತಲುಪುವಂತೆ ಮಾಡಿದೆ. ಯುವಕರಿಗೆ ಎನ್‌ಸಿಸಿ ಬಹುಮುಖಿ ಪ್ರಯೋಜನಗಳನ್ನು ನೀಡುವ ವೇದಿಕೆ, ವಿದ್ಯಾರ್ಥಿಗಳು ಅದನ್ನು ಬಳಸಿ ಉತ್ತಮ ಕೆಡೆಟ್ಸ್ ಆಗಿ ಬೆಳೆದು ಬರಬೇಕು”* ಎಂದು ಹೇಳಿದರು.
ಎನ್‌ಸಿಸಿ ದಿನದ ಅಂಗವಾಗಿ ಸಂಚಾರ ನಿಯಮ ಜಾಗೃತಿ ಮೂಡಿಸಲು ಕೆಡೆಟ್ಸ್ ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಬಂದಿರುವುದು ಸಂತಸದ ವಿಚಾರ ಎಂದು ಅವರು ಶ್ಲಾಘಿಸಿದರು. ಸಮಾಜಮುಖಿ ಕಾರ್ಯಗಳಲ್ಲಿ ಸತತವಾಗಿ ತೊಡಗಿಸಿಕೊಳ್ಳುವಂತೆ ಎಲ್ಲರಿಗೂ ಅವರು ಮನವಿ ಮಾಡಿದರು.

ನಂತರ ಪಿಎಸ್ಐ ಶ್ರೀ ನಂಜಯ್ಯ, ಎಎಸ್‌ಐ ಶ್ರೀ ಶ್ರೀನಿವಾಸ್ ಹಾಗೂ ಪಿಸಿ ಶ್ರೀ ಪರಶುರಾಮ್ ಅವರು ಕೆಡೆಟ್ಸ್‌ಗಳಿಗೆ ನೈಜವಾಗಿ ಸಂಚಾರ ನಿಯಮ ತರಬೇತಿ ನೀಡಿದರು. ಬಳಿಕ ಕೆಡೆಟ್ಸ್ ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮವನ್ನು ಎನ್‌ಸಿಸಿ ಅಧಿಕಾರಿ ಮೇಜರ್ ವನಜಾಕ್ಷಿ ಹಳ್ಳಿಯವರು ಯಶಸ್ವಿಯಾಗಿ ಆಯೋಜಿಸಿದರು.

Tags:

Post a Comment

0Comments

Post a Comment (0)