ಬೆಂಗಳೂರು:- ದಿನಾಂಕ 16-08-2025 ಶನಿವಾರರಂದು ನಗರದ ಯಲಹಂಕ ಉಪನಗರದಲ್ಲಿ ಭಾರತೀಯ ರೆಡ್ ಕ್ರಾಸ್ ಹಾಗೂ ಆಯುಶೀಲಕ್ಕೆ ಸಹಯೋಗದಲ್ಲಿ ಯಲಹಂಕ ಉಪನಗರದ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ ಹಾಗೂ ಔಷಧಿ ವಿತರಣಾ ಮತ್ತು ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು ಇನ್ನು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಗೌರವ ಉಪಾಧ್ಯಕ್ಷರಾದ ನಿವೃತ್ತ ಪೊಲೀಸ್ ಅಧಿಕಾರಿ ಸನ್ಮಾನ್ಯ ಶ್ರೀ ಭಾಸ್ಕರ್ ರವರು ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಆರೋಗ್ಯ ಬಹಳ ಪ್ರಮುಖವಾಗಿತ್ತು ಮಕ್ಕಳ ಆರೋಗ್ಯವನ್ನು ಪೋಷಕರು ನೋಡಿಕೊಳ್ಳುವುದಲ್ಲದೆ ಸಾರ್ವಜನಿಕ ವಲಯದಲ್ಲೂ ಕೂಡ ಮಕ್ಕಳ ಆರೋಗ್ಯದ ಬಗ್ಗೆ ಬಹಳ ಗಮನಹರಿಸಬೇಕು ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಘಟಕ ಇದರ ಬಗ್ಗೆ ತುಂಬಾ ಕಾಳಜಿ ವಹಿಸಿದ್ದು ಅನೇಕ ಸಾಮಾಜಿಕ ಕಾರ್ಯಗಳನ್ನು ಇಂದಿಗೂ ಮಾಡ್ತಾ ಇದೆ ಇದಕ್ಕೆ ಸಾಕ್ಷಿ ಎಂಬಂತೆ ಯಲಹಂಕ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ ಮಾಡಿದರ ಜೊತೆಗೆ ಇಲ್ಲಿಕೂಡ ಆರೋಗ್ಯ ವಿಚಾರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರಲ್ಲಿ ನಮ್ಮ ಸ್ವಯಂಸೇವಕರು ಸದಾ ನಿರತರಾಗಿರುತ್ತಾರೆ. ಇನ್ನು ಶಾಲೆಗಳಲ್ಲಿ ಓದಿನಲ್ಲಾಗಲಿ ಇನ್ನಿತರ ಚಟುವಟಿಕೆಗಳಲ್ಲಾಗಲಿ, ಹಿಂದುಳಿತಕ್ಕಂಥ ವಿದ್ಯಾರ್ಥಿಗಳನ್ನ ಮುನ್ನೆಲೆಗೆ ತರುವಂತ ಕೆಲಸವನ್ನು ಇಳಿಯ ಶಿಕ್ಷಕರು ಮಾಡಬೇಕು ಎಂದು ವಿಶೇಷವಾದ ಮನವಿಯನ್ನು ಕೂಡ ಮಾಡಿದರು.
ಇನ್ನು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಗ್ಲೋಬಲ್ ವಿಮೆನ್ ರೈಸ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಿಥುನ್ ಹುಗ್ಗಿ ಅವರು ಮಾತನಾಡಿ ಆರೋಗ್ಯವಂತ ಸಮಾಜ ಸೃಷ್ಟಿಗಾಗಿ ಇಂದಿನ ಮಕ್ಕಳಲ್ಲಿ ಪೌಷ್ಟಿಕತೆ ಅನಿವಾರ್ಯವಾಗಿದೆ ಇದರಿಂದ ಪೌಷ್ಟಿಕತೆಯ ಜೊತೆಗೆ ಮಕ್ಕಳ ಆರೋಗ್ಯಕ್ಕೆ ತನ್ನದೇ ಆದಂತಹ ಶೈಲಿಯಲ್ಲಿ ರೆಡ್ ಕ್ರಾಸ್ ಸಂಸ್ಥೆ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ
ಇನ್ನು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಗ್ಲೋಬಲ್ ವಿಮೆನ್ ರೈಸ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಿಥುನ್ ಹುಗ್ಗಿ ಅವರು ಮಾತನಾಡಿ ಆರೋಗ್ಯವಂತ ಸಮಾಜ ಸೃಷ್ಟಿಗಾಗಿ ಇಂದಿನ ಮಕ್ಕಳಲ್ಲಿ ಪೌಷ್ಟಿಕತೆ ಅನಿವಾರ್ಯವಾಗಿದೆ ಇದರಿಂದ ಪೌಷ್ಟಿಕತೆಯ ಜೊತೆಗೆ ಮಕ್ಕಳ ಆರೋಗ್ಯಕ್ಕೆ ತನ್ನದೇ ಆದಂತಹ ಶೈಲಿಯಲ್ಲಿ ರೆಡ್ ಕ್ರಾಸ್ ಸಂಸ್ಥೆ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ
ಅದರಲ್ಲೂ ಮಕ್ಕಳ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ರೋಗವನ್ನು ತಡೆಗಟ್ಟುವ ವಿಧಾನಗಳು ಮೊದಲನೇದಾಗಿ ಆರೋಗ್ಯವನ್ನು ಕಾಪಾಡುವಂತ ವಿಧಾನಗಳು ಆಮೇಲೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು, ರೋಗವನ್ನು ತಡೆಗಟ್ಟುವ ವಿಧಾನಗಳನ್ನು ಹಮ್ಮಿಕೊಳ್ಳುವುದು, ಸೇರಿದಂತೆ ಇಂತಹ ಅನೇಕ ಯೋಜನೆಗಳನ್ನು ರೆಡ್ ಕ್ರಾಸ್ ಸಂಸ್ಥೆ ಇಂದಿಗೂ ಮಾಡಿಕೊಂಡು ಬಂದಿದೆ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಂತಹ ಶಾಲೆಗಳಲ್ಲಿ ಅತ್ಯಂತ ವಿಶೇಷವಾಗಿ ಮಕ್ಕಳ ಕಾಳಜಿಯನ್ನ ನೋಡಿಕೊಳ್ಳಬೇಕಾದರೆ ಇಂತಹ ಸಂಘ ಸಂಸ್ಥೆಗಳು ಮುಂದಾಗಬೇಕಾಗಿದೆ ಅಂತಹ ಸಂಘ ಸಂಸ್ಥೆಗಳಿಗೆ ಈಗ ಸಾರ್ವಜನಿಕರ ಸಲಗ ಬಂದಾಗಿದೆ , ಇನ್ನು ಸಾರ್ವಜನಿಕರು ಎರಡು ಕ್ರಾಸ್ ಸಂಸ್ಥೆ ಎಂದರೆ ಕೇವಲ ಬ್ಲಡ್ ಬ್ಯಾಂಕ್ ಅಷ್ಟೇ ಅಲ್ಲ ಇನ್ನು ಅನೇಕ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಆಸಕ್ತಿ ಉಳ್ಳವರು ಸಹ ಈ ಒಂದು ಸಂಸ್ಥೆಯ ಸದಸ್ಯರಾಗಬಹುದು ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಯೆಲಹಂಕ ವೈಜ್ಞಾನಿಕಾರಿಗಳಾದ ಡಾ. ಸಂಜಯ್ ಅವರು ಮಾತನಾಡಿ , ಅತ್ಯಂತ ವಿಶೇಷವಾಗಿ ಮಕ್ಕಳಿಗೆ ಹ್ಯುಮಿನಿಟಿ ಬೂಸ್ಟರ್ ಕಿಟ್ ವಿತರಣೆ ಮಾಡುವ ಮೂಲಕ ಮಕ್ಕಳಲ್ಲಿ ಆರೋಗ್ಯದ ಕಾಳಜಿ ಬರಬೇಕೆಂದರೆ ಪಾಲಕರು ಅದರ ಬಗ್ಗೆ ಗಮನಹರಿಸಬೇಕು ಮತ್ತು ಔಷಧಿಗಳ ಬಗ್ಗೆ ತಿಳುವಳಿಕೆ ಆಮೇಲೆ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವಲ ವಿಧಾನಗಳನ್ನು ವಿವರಿಸಿದ್ದರು . ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಗೌರವ ಉಪಾಧ್ಯಕ್ಷರಾದ ಶ್ರೀ ಭಾಸ್ಕರ್ ರಾವ್ ನಿರುತ ಐಪಿಎಸ್ ಅಧಿಕಾರಿಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲಹಂಕ ತಾಲೂಕು ಉಪನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೈಲಾ ಜಿಲ್ಲಾ ಆಯುಷ್ಯ ಅಧಿಕಾರಿಗಳಾದ ಡಾ. ಎನ್ ಶಾಂತಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಶ್ರೀ ಬಾಲಕೃಷ್ಣಪ್ಪ ಶೆಟ್ಟಿ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಸದಸ್ಯರಾದ ಶ್ರೀ ನಾಗೇಶ್ ಎಂ ಸಿ ಇನ್ನು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಯೆಲಹಂಕ ಉಪನಗರದ ವೈದ್ಯಾಧಿಕಾರಿಗಳಾದ ಹಾಗೂ ಶ್ರೀ ಟಿ ಎಂ ಪ್ರಸಾದ್ ಇನ್ನೂ ಗ್ಲೋಬಲ್ ರೈಸ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಥುನ್ ಹುಗ್ಗಿ ಪೊಲೀಸ್ ಇಲಾಖೆಯ CRPF ಶ್ರೀ ಸೋಮಶೇಖರ್ ಮತ್ತು ಎಸ್ ಡಿ ಎಂ ಅಧ್ಯಕ್ಷರು, ಸದಸ್ಯರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತಿ ಇದ್ದರು.