MUDDEBIHAL ಮದರಿ ಗ್ರಾಮದ ಡಾ. ಪರಶುರಾಮ್ ವಡ್ಡರ್ ಅವರಿಗೆ ಭೀಮ ಸಂಸ್ಕೃತಿ ಪತ್ರಿಕೆಯ ವಿಶೇಷ ಸನ್ಮಾನ

Bhima Samskruthi
By -
0

ವಿಜಯಪುರ: ಮದರಿ ಗ್ರಾಮದ ಡಾ. ಪರಶುರಾಮ್ ವಡ್ಡರ್ ಅವರಿಗೆ ಭೀಮ ಸಂಸ್ಕೃತಿ ಪತ್ರಿಕೆಯ ವಿಶೇಷ ಸನ್ಮಾನ


ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದ ಗಣ್ಯ ವೈದ್ಯರಾದ ಡಾ. ಪರಶುರಾಮ್ ಯಮನಪ್ಪ ವಡ್ಡರ್ ಅವರು ಇತ್ತೀಚೆಗೆ ಮುದ್ದೇಬಿಹಾಳ  ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಮುಂಬಡ್ತಿ ಹೊಂದಿರುವ ಹಿನ್ನೆಲೆಯಲ್ಲಿ ಭೀಮ ಸಂಸ್ಕೃತಿ ಪತ್ರಿಕೆಯ ಸಹ ಸಂಪಾದಕ ಮಹಾಂತೇಶ್ ಡಿ. ಬಾಗಲಕೋಟ ಅವರಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ ಗೆಳೆಯರ ಬಳಗದ ಮುತ್ತು ನಾಯ್ಕೋಡಿ (ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ತಾಲೂಕು ಉಪಾಧ್ಯಕ್ಷ), ಅಪ್ಪು ಗೌಡ ಪಾಟೀಲ್, ಶಂಕರ್ ಚಲವಾದಿ, ಶಮಿಕಾಂತ್ ಮಾಲಗತ್ತಿ, ಶಾಂತು ನಾಯಕ್, ಸಮಾಜದ ಯುವ ಹೋರಾಟಗಾರ, ಶಂಕರ್ ಅಜ್ಮನಿ, ಶಾಂತು ನಾಯಕ್ಮಕ್ಕಳ, ಶಿವು ಚಿಮ್ಮಲಗಿ, ಆನಂದ್ ಹಡಲಗೇರಿ, ಜಾವೀದ್ ಡವಳಗಿ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಭೀಮ ಸಂಸ್ಕೃತಿ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಯಲ್ಲಪ್ಪ ಭೀಮ್ ಸೇನ್ ಮೌರ್ಯ ಪೂಜಾರಿ ಅವರು,


“ಡಾ. ಪರಶುರಾಮ್ ವಡ್ಡರ್ ವೈದ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಸಮಾಜದ ಕಡುಬಡ ವರ್ಗದ ಜನರಿಗೆ ಸೇವೆ ಸಲ್ಲಿಸುವಲ್ಲಿ ಅವರು ಮಾದರಿಯಾಗಿದ್ದಾರೆ. ಅತೀ ಬಡತನದಲ್ಲಿಯೂ ಶಿಕ್ಷಣ ಪೂರ್ಣಗೊಳಿಸಿ ಇಂದು ಉನ್ನತ ಹುದ್ದೆ ತಲುಪಿರುವುದು ಅವರ ತಾಯಿಯ ಆಶೀರ್ವಾದ ಮತ್ತು ಭುವನೇಶ್ವರಿ ದೇವಿಯ ಕೃಪೆಯ ಫಲ. ಅವರ ಸೇವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರೇರಣೆಯಾದಂತಾಗಲಿ,” ಎಂದು ಕೊಂಡಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಡಾ. ವಡ್ಡರ್ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.


ಸಮಾಜ ಸೇವೆ, ವೈದ್ಯಕೀಯ ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ತ್ಯಾಗದಿಂದ ಕೆಲಸ ಮಾಡುತ್ತಿರುವ ಡಾ. ಪರಶುರಾಮ್ ವಡ್ಡರ್ ಅವರಿಗೆ ಸ್ಥಳೀಯರು ಹಾಗೂ ಸಹೋದ್ಯೋಗಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

Tags:

Post a Comment

0Comments

Post a Comment (0)