Bangalore ಬಿಬಿಎಂಪಿ ಮುಖ್ಯ ಆಯುಕ್ತರನ್ನು ಭೇಟಿ ನೀಡಿ ಮನವಿ ಸಲ್ಲಿಸಿದ ಪತ್ರಿಕಾ ನಿಯೋಗ !

Bhima Samskruthi
By -
0
ಬಿಬಿಎಂಪಿ ಪತ್ರಕರ್ತರ ಬಳಗದಿಂದ ಇಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, 2025ನೇ ಸಾಲಿನ ಸಣ್ಣ ಮತ್ತು ಮಧ್ಯಮ ನಿಯತಕಾಲಿಕೆಗಳಿಗೆ  ನೀಡಲಾಗುವ ಪ್ರೋತ್ಸಾಹ ಜಾಹೀರಾತು ನೀಡುವಂತೆ ಪತ್ರಿಕಾ ಬಳಗವು ಮನವಿ ಸಲ್ಲಿಸಿತು.
 ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಎಲ್ಲಾ ಪತ್ರಿಕಾ ಬಳಗಕ್ಕೆ ಜಾಹೀರಾತು ನೀಡುವ ಬಗ್ಗೆ ಶೀಘ್ರದಲ್ಲೇ ತಮ್ಮ ಮನವಿಗೆ ಸ್ಪಂದಿಸಿ, ಜಾಹೀರಾತು ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರ ಕರ್ತರುಗಳಾದ ಹುಲಿ ಅಮರನಾಥ್, ಬಿಕೆ ಪ್ರಸನ್ನ, ವಿಜಯ್ ಕುಮಾರ್, ಮೂರ್ತಿ,ಜಿ.ವಿ ರಾಮ್ ರಾವ್, ಪ್ರಮಥ ನಾಥ್, ಮಾಯಣ್ಣ, ಕನ್ನಡ ಪಾಷಾ, ಆರ್ ಶಿವಕುಮಾರ್, ಸಿದ್ದಪ್ಪಾಜಿ, ಮೌರ್ಯ ಪೂಜಾರ್, ಉಮೇಶ್, ತಂಜಿಮ್ , ಎನ್ ವೇಣುಗೋಪಾಲ್ ಹಾಗೂ ಇನ್ನಿತರ ಪತ್ರಕರ್ತರು ನಿಯೋಗದೊಂದಿಗೆ ಇದ್ದರು.
Tags:

Post a Comment

0Comments

Post a Comment (0)