ಮುದ್ದೇಬಿಹಾಳ: ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ! ನಮ್ಮ ಸಾಹಿತ್ಯವನ್ನು ನಾವೆಲ್ಲರೂ ಕೂಡ ಕೇಳಿದ್ದೇವೆ ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಂತ ಕನಕ ದಾಸ ಶಾಲೆಯ ಮಕ್ಕಳು ಅದಕ್ಕೆ ಒಂದು ಅರ್ಥವನ್ನು ಕೊಟ್ಟಿದ್ದಾರೆ ಹೌದು ಸ್ನೇಹಿತರೆ, ಗುರುವಿನ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಬೇಕು. ತಂದೆ, ತಾಯಿ ಮೊದಲ ಗುರು ಎನ್ನುವುದನ್ನು ಮರೆಯಬಾರದು. ಭಾರತೀಯ ಸಂಸ್ಕೃತಿಯಲ್ಲಿ ಗುರು ಎನ್ನುವ ಪದಕ್ಕೆ ಅರ್ಥಕ್ಕೆ ಅತ್ಯುನ್ನತ ಸ್ಥಾನವಿದೆ. ತಂದೆ, ತಾಯಿ ನಂತರದ ಶ್ರೇಷ್ಠ ಸ್ಥಾನದಲ್ಲಿ ಬರುವ ಗುರುಗಳು ಶಿಸ್ತು, ಶ್ರದ್ಧೆ ಮತ್ತು ಜ್ಞಾನದ ಪ್ರತಿಬಿಂಬ ಎಂದು ಸರೂರು ಹಾಲುಮತ ಮೂಲ ಗುರುಪೀಠದ ಮಲ್ಲಿಕಾರ್ಜುನ ಗುರುವಿನ್ ಹೇಳಿದರು.ತಾಲೂಕು ಕುರುಬರ ಸಂಘದ ಸಂತ ಕನಕದಾಸ ಶಾಲೆಯಲ್ಲಿ ಗುರುವಾರ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳು ಕೇಂದ್ರಬಿಂದುವಾದರು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಗುರುಗಳ ಆರಾಧನೆ ಮಾಡಲೆಂದೇ ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಈ ದಿನ ವೇದವ್ಯಾಸರ ಜನ್ಮದಿನವೂ ಆಗಿದೆ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಮಾನವೀಯ ಮೌಲ್ಯಗಳ ಬೋಧಕರಾದ ಗುರುಗಳಿಗೆ ನಮಿಸಬೇಕಾದ ಪವಿತ್ರ ದಿನ ಇದಾಗಿದೆ ಎಂದರು. ಶಾಲೆಯ ಕಾರ್ಯದರ್ಶಿ
ಬಿ.ಎಸ್.ಮೇಟಿ, ಬಾಚಿಹಾಳ ವಕೀಲರು, ಸಮಾಜದ ಅನೇಕ ಬಂಧುಗಳು ಹಾಗೂ ಪ್ರೌಢಶಾಲೆ ಮುಖ್ಯಗುರುಗಳಾದ ಪಣದಕಟ್ಟಿ ಶಾಲೆಯ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ತಾಯಿ, ತಂದೆಗಳಿಗೆ ಮಕ್ಕಳು ಪಾದ ಪೂಜೆ ಮಾಡಿ, ಸಾಷ್ಟಾಂಗ ನಮಸ್ಕಾರ ಗುರುಪೂರ್ಣ ಅರ್ಥ ಪೂರ್ಣವಾಗಿ ಮೂಲಕ ಆಚರಿಸಿದರು. ಎ.ಆರ್. ತಡಸದ ಪ್ರಾರ್ಥಿಸಿದರು. ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎಂ.ಎನ್.ಯರಝರಿ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್. ಕಬಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ನಿರ್ವಹಿಸಿದರು.