♦️ಭಾರತ್ ಬಂದ್ಗೆ ಕರೆ ಕೊಟ್ಟಿದ್ದೇಕೆ? ಬೇಡಿಕೆಗಳೇನು?
♦️ಭಾರತ್ ಬಂದ್ಗೆ ಯಾವೆಲ್ಲ ಸಂಘಟನೆಯ ಬೆಂಬಲ ಇದೆ?
♦️ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
ಭಾರತ್ ಬಂದ್ಗೆ 10 ಸೆಂಟ್ರಲ್ ಟ್ರೇಡ್ ಯೂನಿಯನ್ಗಳು ಕರೆ ನೀಡಿವೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತ್ ಬಂದ್ಗೆ ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವು ಹೊಂದಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ರಾಷ್ಟ್ರ ವ್ಯಾಪಿ ಮುಷ್ಕರದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ, ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 25 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ಔಪಚಾರಿಕ, ಅನೌಪಚಾರಿಯ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಭಾರತ್ ಬಂದ್ ನಡೆಸಲು ಕಾರ್ಮಿಕ ಸಂಘಟನೆಗಳು ಕಳೆದ ಕೆಲ ತಿಂಗಳಿನಿಂದ ಭಾರಿ ಸಿದ್ಧತೆ ನಡೆಸಿವೆ. ರೈತರು, ಗ್ರಾಮೀಣಾ ಕಾರ್ಮಿಕರು ಕೂಡ ನಾಳೆಯ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗಿಯಾಗುವರು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಹೇಳಿದ್ದಾರೆ.
ಬಂದ್ಗೆ ಯಾರೆಲ್ಲ ಬೆಂಗಲ..?
✅ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
✅ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
✅ಹಿಂದ್ ಮಜ್ದೂರ್ ಸಭಾ (HMS)
✅ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU)
✅ಟ್ರೇಡ್ ಯೂನಿಯನ್ ಕೋ ಅರ್ಡಿನೇಷನ್ ಸೆಂಟರ್ ( TUCC)
✅ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್( AIUTUC)
✅ಸೆಲ್ಪ್ ಎಂಪ್ಲಾಯಿಡ್ ವುಮೆನ್ಸ್ ಅಸೋಸಿಯೇಷನ್ (SEWA)
✅ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU)
✅ಲೇಬರ್ ಪ್ರೊಗ್ರೆಸ್ಸಿವ್ ಫೆಡರೇಷನ್ ( LPF)
ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC)