ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಮಲ್ಲೇಶ್ವರದ ಈಜುಕೊಳ ಬಡಾವಣೆಯ ಸುಧೀಂಧ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 18 ರಿಂದ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ನವೆಂಬರ್ 21 ರಂದು ಸೋಮಾರೋಪಕವಾಗಿ ಜರುಗಿತು.
ಕಾರ್ಯಕ್ರಮದ ಮೊದಲ ಮೂರು ದಿನಗಳು ವಿವಿಧ ಭಜನಾ ಮಂಡಳಿಗಳಿಂದ *“ಭಜನಾಮೃತ”* ಮತ್ತು ಪಂ|| ಶ್ರೀ ಪ್ರಸನ್ನಾಚಾರ್ ತಂತ್ರಸಾರ ಅವರಿಂದ *“ಕಾರ್ತೀಕ ಮಾಸ ಮಹಾತ್ಮೆ”* ಕುರಿತ ಉಪನ್ಯಾಸಗಳು ಭಕ್ತರನ್ನು ಆಕರ್ಷಿಸಿದವು.
21ರ ಸಂಜೆ ಯುವಗಾಯಕ ಶ್ರೀ ಪ್ರಾಣೇಶ್ ಪಿ. ಭಾರಧ್ವಾಜ್ ಅವರ ಭಕ್ತಿ ಸಂಕೀರ್ತನೆ ಕಾರ್ಯಕ್ರಮ ವಿಶೇಷ ಮೆರುಗು ನೀಡಿತು. ಇವರಿಗೆ ಕೀಬೋರ್ಡ್‌ನಲ್ಲಿ ವಿದ್ವಾನ್ ರಾಜೇಂದ್ರ ಬೆಂಡೆ, ತಬಲಾದಲ್ಲಿ ವಿದ್ವಾನ್ ಮಧುಸೂದನ್ ಕೊಪ್ಪ ಮತ್ತು ತಾಳದಲ್ಲಿ ಹಿರಿಯ ಕಲಾವಿದ ಗೋಪಿನಾಥದಾಸರು ಸಂಗಡಿಗರಾಗಿ ಕೈಜೋಡಿಸಿದರು.
ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಭಕ್ತರನ್ನು ಸ್ವಾಗತಿಸಿದರು. ಶ್ರೀಮಠದ ಪದಾಧಿಕಾರಿಗಳಾದ ಶ್ರೀ ಪುರುಷೋತ್ತಮ ಅವರು ವಂದನಾರ್ಪಣೆ ಸಲ್ಲಿಸಿದರು.
ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಜೊತೆಗೆ ಶ್ರೀಮಠದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಭಕ್ತಿ–ಭಾವವನ್ನು ಹೆಚ್ಚಿಸಿದರು.