ಆರೋಪಿಗಳನ್ನು ಆಂಧ್ರ ಪ್ರದೇಶದ ನಾಗನೂರಿ ಕುಮಾರ್ (20), ಸಾಗರ್ ಸಣ್ಣಕ್ಕಿ (32), ಶಿವಕುಮಾರ್ (30), ಗುಡ್ಡು ಸಾಬ್ (36), ಹಾಲಪ್ಪ (29) ಮತ್ತು ಶಿವಶಂಕರ್ (20) ಎಂದು ಗುರುತಿಸಲಾಗಿದೆ.
ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರು ಖದೀಮರ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದು, ಅವರಿಂದ ₹25 ಲಕ್ಷ ಮೌಲ್ಯದ 70 ಮೊಬೈಲ್ ಫೋನ್‌ಗಳು, ಕಾರು ಮತ್ತು ಬೈಕ್ ವೊಂದನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಆಂಧ್ರ ಪ್ರದೇಶದ ನಾಗನೂರಿ ಕುಮಾರ್ (20), ಸಾಗರ್ ಸಣ್ಣಕ್ಕಿ (32), ಶಿವಕುಮಾರ್ (30), ಗುಡ್ಡು ಸಾಬ್ (36), ಹಾಲಪ್ಪ (29) ಮತ್ತು ಶಿವಶಂಕರ್ (20) ಎಂದು ಗುರುತಿಸಲಾಗಿದೆ.
ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತುತ್ತಿದ್ದ ಈ ಗ್ಯಾಂಗ್, ಬಸ್ ಹತ್ತುವ ಸಮಯದಲ್ಲಿ ತಳ್ಳಾಡಿಕೊಂಡು ಪ್ರಯಾಣಿಕರ ಜೇಬಿನಲ್ಲಿದ್ದ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು.