ದಾಂಡೇಲಿ : ದಾಂಡೇಲಿಯಿಂದ ಬೆಂಗಳೂರುವರೆಗೆ ಪ್ರಯಾಣಿಕ ರೈಲನ್ನು ಪ್ರಾರಂಭಿಸಲು ಲಿಖಿತವಾದ ಮನವಿಯನ್ನು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗು ಶಾಸಕರಾದ ಆರ್. ವಿ. ದೇಶಪಾಂಡೆ ಮತ್ತು ಜನರಲ್ ಮ್ಯಾನೇಜರ್ ರೈಲ್ವೆ ಇವರಿಗೆ ಲಿಖಿತವಾದ ಮನವಿಯನ್ನು ಕಳಿಸಲಾಗಿದೆ.
ರೈಲನ್ನು ಪ್ರಾರಂಭಿಸಲು ದಾಂಡೇಲಿಯ ಅನೇಕ ಸಂಘಟನೆಗಳು ಹಲವಾರು ಬಾರಿ ಲೀಖಿತ ಮನವಿ ಕಳುಹಿಸುತ್ತಿದ್ದರೂ ಸಹ ಇಲ್ಲಿಯವರೆಗೆ ರೈಲನ್ನು ಪ್ರಾರಂಭಿಸುವ ಯಾವುದೇ ಸೂಚನೆ ಕಂಡು ಬರುತ್ತಿಲ್ಲ ದಾಂಡೇಲಿ, ಜೋಯಿಡಾ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಪ್ರತಿದಿನ ಐದರಿಂದ ಆರು ಖಾಸಗಿ ಬಸ್ಸುಗಳು ಬೆಂಗಳೂರಿನಿಂದ ದಾಂಡೇಲಿಯವರೆಗೆ ಬರುತ್ತವೆ ಅಲ್ಲದೆ ಈಗಾಗಲೆ ಕೇಂದ್ರ ಸರ್ಕಾರವು ದೇಶದ ವಿವಿಧ ಕಡೆಯಿಂದ ಬೇರೆ ಬೇರೆ ಮಾರ್ಗದಲ್ಲಿ ಪ್ರಯಾಣಿಕ ರೈಲನ್ನು ಪ್ರಾರಂಭಿಸುವುದು ಮತ್ತು ಉನ್ನತಿಕರಣ ಮಾಡುವುದು ಸತತವಾಗಿ ನಡೆದಿದೆ.
ಆದರೆ ದಾಂಡೇಲಿ ರೈಲು ನಿಲ್ದಾಣವು ಸಂಪೂರ್ಣವಾಗಿ ರೈಲು ಪ್ರಾರಂಭಿಸುವ ಸ್ಥಿತಿಯಲ್ಲಿ ಸಿದ್ದ ಇದ್ದರೂ ಸಹ ಇಲ್ಲಿ ರೈಲು ಪ್ರಾರಂಭಿಸಲು ಯಾವುದೇ ಕ್ರಮ ವಹಿಸದೇ ಇರುವುದರಿಂದ ದಾಂಡೇಲಿ ಯಿಂದ ಬೆಂಗಳೂರಿಗೆ ಪ್ರಯಾಣಿಕ ರೈಲನ್ನು ಅಗಸ್ಟ್ 15ರ ಒಳಗೆ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ತಾಲೂಕಿನ ಎಲ್ಲ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
ದಾಂಡೇಲಿ ಸಮಗ್ರ ಹೋರಾಟ ಸಮಿತಿ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಭೆಯನ್ನು ಉದ್ದೇಶಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂಖಾನ ಉಪಾಧ್ಯಕ್ಷರಾದ ಅಶೋಕ್ ಪಾಟೀಲ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡಪ್ಪನವರ. ಮುಜಿಬಾ ಛಬ್ಬಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರುಗಳಾದ
ದತ್ತಾತ್ರಯ ಹೆಗಡೆಕರ, ಮೊಹಮ್ಮದ್ ಗೌಸ್ ಬೆಟಗೇರಿ, ಶಹೆಜಾದಿ ಕುಲಶಾಪುರ, ಎಂ ಡಿಮದಾರಸಾಬ ಆಯಿಶಾ ಮೂಕಾಸಿ, ವಿನೋದ್, ಗಣಪತಿ, ಫಾರುಕ್ ಶೇಕ್, ಶಾಮ್ ಬೆಂಗಳೂರ್, ಪ್ರೇಮಲತಾ ಚೊಖಡಾ, ಎಲ್ಲಮ್ಮ ಡಮಾಮ್, ಶಮೀಮ್ ಕಿತ್ತೂರ, ಹಾಗು ಇನ್ನು ಅನೇಕ ಹಿರಿಯರು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.