ಬೆಂಗಳೂರು :- ಬೆಂಗಳೂರು ನಗರದ ರಾಜಾಜಿನಗರದಲ್ಲಿರುವ ಕ್ಯಾಪಿನೆಕ್ಸ್ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಕುರಿತಾಗಿ ಮಾತನಾಡಿದ ಅವಧೂತ ಶ್ರೀ ವಿನಯ್ ಗುರೂಜಿಯವರು ಸಮಾಜ ಸೇವೆ ಮನೋಭಾವ ಹೊಂದಿರಬೇಕು ಮನುಷ್ಯ ಜ್ಞಾನದ ಅರಿವನ್ನ ತಿಳಿದರೆ ಮಾತ್ರ ಜ್ಞಾನಿಯಾಗುವುದಿಲ್ಲ ಜ್ಞಾನದ ಆಳವನ್ನು ತಿಳಿದರೆ ಜ್ಞಾನಿಯಾಗುತ್ತಾನೆ . ಎನ್ನುವಂತಹ ವಿಶೇಷ ಅರ್ಥಪೂರ್ಣ ವಿಷಯವನ್ನು ಕಾರ್ಯಕ್ರಮದಲ್ಲಿ ಹೇಳಿದರು ಇನ್ನು ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಮಾಜ ಸೇವೆ ಮನೋಭಾವ ಹೊಂದಬೇಕು ಎಂದು ಹೇಳಿದರು ಇದೇ ಸಂದರ್ಭದಲ್ಲಿ ಕ್ಯಾಪಿನೆಕ್ಸ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಮನ್ಮಥಯ್ಯ ಸ್ವಾಮಿ ಇವರ ಹುಟ್ಟು ಹಬ್ಬದ ನಿಮಿತ್ಯವಾಗಿ ಪ್ರಕಾಶ್ ನಗರ ಸುತ್ತಮುತ್ತಲು ಸ್ವಚ್ಛತಾ ಕಾರ್ಯ ಮಾಡುತ್ತಿರುವ ಬಿಬಿಎಂಪಿ ಸಿಬ್ಬಂದಿಗಳಿಗೆ ಉಚಿತವಾಗಿ ಉಡುಗೊರೆಯನ್ನು ನೀಡಲಾಯಿತು . ಈ ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಗುಂಡಯ್ಯಸ್ವಾಮಿ ಹಾಗೂ ಶ್ರೀಮತಿ ಪ್ರೇಮಲತಾ ಮತ್ತು ಸಮಾಜ ಸೇವಕ ಮಿಥುನ್ ಹುಗ್ಗಿ ಮತ್ತು ಸಿಬ್ಬಂದಿಗಳು ಉಪಸ್ಥಿತಿ ಇದ್ದರು.
ಇನ್ನು ಬಿಬಿಎಂಪಿ ವಿಶೇಷ ವೈದ್ಯಾಧಿಕಾರಿ ಡಾಕ್ಟರ್ ನವೀನ್ ಅವರ ವೃತ್ತಿ ಜೀವನದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು , ತದನಂತರ ಸಿಬ್ಬಂದಿಗಳಿಗೆ ವಿಶೇಷವಾಗಿ ಹಣ್ಣು ಹಾಗೂ ಚಾಕ್ಲೇಟ್ ನೀಡುವ ಮೂಲಕ ಅವಧೂತ ವಿನಯ್ ಗುರೂಜಿಗಳು ಆಶೀರ್ವಚನ ನೀಡಿದರು.
ಕ್ಯಾಪಿನೆಕ್ಸ್ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸ್ವಯಂ ಪ್ರೇರಣೆಯಿಂದ ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಲ್ಯಾಬ್‌ಜೆನ್ ಹೆಲ್ತ್ ಡೈಗ್ನೋಸ್ಟಿಕ್ ಸೆಂಟರ್ ಬೆಂಗಳೂರು,ಪ್ರೋಕ್ಯೂರ್ ಡೆಂಟಲ್ ಕೇರ್
ವಾಸನ್ ಐ ಕೇರ್ ಬೆಂಗಳೂರು,
ಸುಶ್ರುಥ ಸ್ವಚ್ಛಂದ ರಕ್ತದಾನ ಕೇಂದ್ರ, ಹಾಗೂ ಬಿಬಿಎಂಪಿಯ ನಮ್ಮ ಕ್ಲಿನಿಕ್ ಅವರು ಕೂಡ ಭಾಗವಹಿಸಿದ್ದರು.