Bangalore ನುಡಿಗೋಲು-3 ಕೃತಿ ಲೋಕಾರ್ಪಣೆ ಸಮಾರಂಭ

Bhima Samskruthi
By -
0

ಬೆಂಗಳೂರು ನಗರದ, ಮಲ್ಲತ್ತಳ್ಳಿಯ ಡಾ. ಅಂಬೇಡ್ಕರ್ ತಾಂತ್ರಿಕ ಕಾಲೇಜು ಎದುರಿನ, ಕನ್ಯಾಕುಮಾರಿ ಶಾಲೆ ಹಿಂಭಾಗದಲ್ಲಿರುವ ಗಾನ ಪಲ್ಲವಿ ಆಡಿಟೋರಿಯಂ ನಲ್ಲಿ ಜಾಣಗೆರೆ ಪತ್ರಿಕೆ ಪ್ರಕಾಶನದ ಸಾಹಿತಿ ಪತ್ರಕರ್ತರ ಸಾಹಿತಿಗಳು ನುಡಿಗಳು -೩ ಅಪೂರ್ವ ಸಾಧಕರ ನುಡಿ ಸಂಕಥನ ಕೃತಿಯ ಲೋಕಾರ್ಪಣೆ ಸಮಾರಂಭ ಅದ್ದೂರಿಯಿಂದ ಜರುಗಿತು.
ಹಿರಿಯ ಕವಿ ಹಾಗೂ ಚಿಂತಕರು ಆದ ಪ್ರೊ. ಜಿ ಎಸ್ ಜಿ ಸಿದ್ದರಾಮಯ್ಯ ಅವರು ಉದ್ಘಾಟಕರಾಗಿ, ಪ್ರಸಿದ್ಧ ವಿಮರ್ಶಕರು ಚಿಂತಕರು ಆದ ಡಾಕ್ಟರ್ ಎಂ ಎಸ್ ಆಶಾದೇವಿ ಅವರು ಕೃತಿ ಬಿಡುಗಡೆಗೊಳಿಸಲು, ಕರ್ನಾಟಕ ಸಂಘ ಮಂಡ್ಯ, ಇದರ ಅಧ್ಯಕ್ಷರಾದ ಡಾ. ಬಿ ಜೆ ಪ್ರಕಾಶ್ ಗೌಡ ಅಧ್ಯಕ್ಷತೆ ವಹಿಸಿದ್ದು, ರೈತ ಸಂಘದ ನಾಯಕರಾದ ಶ್ರೀಮತಿ ಸುನಂದ ಜಯರಾಮ್, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಶ್ರೀ ಮಾವಳ್ಳಿ ಶಂಕರ್, ವೈದ್ಯಕ್ಷೇತ್ರದ ಪ್ರಸಿದ್ಧ ಲೇಖಕರಾದ 
 ಡಾ. ವಸುಂಧರಾ ಭೂಪತಿ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ, ಕೃತಿ ರಚಿಸಿದ ಸಾಹಿತಿಗಳು ಪತ್ರಕರ್ತರು ಆದ ಜಾಣಗೆರೆ ವೆಂಕಟರಾಮಯ್ಯ ನವರು ವೇದಿಕೆ ಅಲಂಕರಿಸಿದ್ದರು.

ಈ ಸುಂದರ ಸಮಾರಂಭದಲ್ಲಿ ಹಿರಿಯ ಕವಿ ಹಾಗೂ ಚಿಂತಕರಾದ ಪ್ರೊ. ಎಸ್ ಜಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಪ್ರಸಿದ್ಧ ವಿಮರ್ಶಕರು ಹಾಗೂ ಚಿಂತಕರು ಆದ ಡಾಕ್ಟರ್ ಎಂ ಎಸ್ ಆಶಾದೇವಿ ಅವರು ನುಡಿಗೋಲು-೩ ಸಾಧಕರ ನುಡಿ ಸಂಕಥನ ಕೃತಿಯನ್ನು ಲೋಕಾರ್ಪಣೆ ಮಾಡಿದರು. ವೇದಿಕೆ ಗಣ್ಯರನ್ನು ಸಾಹಿತಿಗಳು ಪತ್ರಕರ್ತರು ಆದ ಜಾಣಗೆರೆ ವೆಂಕಟರಾಮಯ್ಯ ಅವರು ಸನ್ಮಾನಿಸಿ ಗೌರವಿಸಿದರು.

ವೇದಿಕೆ ಗಣ್ಯರುಗಳು ಅವರವರದೇ ದಾಟಿಯಲ್ಲಿ ಮಾತನಾಡಿ ಕೃತಿ ರಚನೆಕಾರರಾದ ಸಾಹಿತಿ ,ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಭಿನಂದಿಸಿ, ಸಭಿಕರನ್ನು ಜಾಗೃತಿಯೊಂದಿಗೆ ಬೆರೆಗುಗೊಳಿಸಿದರು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಹೋರಾಟಗಾರರಾದ ಆರ್.ಜಿ. ಹಳ್ಳಿ ನಾಗರಾಜ್, ಎಂ ಪ್ರಕಾಶಮೂರ್ತಿ ಡಿ ಮಂಜುನಾಥ್ ಗೌಡ ಅವರುಗಳನ್ನು ಸನ್ಮಾನಿಸಿ ಗೌರವತೋರಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬುದ್ಧಿಜೀವಿಗಳು, ಸಾಹಿತಿಗಳು, ವಿಮರ್ಶಕರು, ಪತ್ರಿಕೆ ಸಂಪಾದಕರುಗಳು, ಪತ್ರಕರ್ತರು, ಅಭಿಮಾನಿಗಳು ಹಾಗೂ ಸ್ನೇಹಿತರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 *ಉಮೇಶ್ ಯಲಹಂಕ*
Tags:

Post a Comment

0Comments

Post a Comment (0)