ಮುದ್ದೇಬಿಹಾಳ: ಕಳೆದ ಒಂದು ವರ್ಷದ ಹಿಂದೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿ ಹೆಸರುವಾಸಿಯಾಗಿದ್ದರು ಇನ್ನು ಒಂದು ವರ್ಷ ಕಳೆಯುವ ಮುನ್ನವೇ ಮಾನ್ಯ ಮುಖ್ಯಮಂತ್ರಿಗಳ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಯತೀಂದ್ರ ಸಿದ್ದರಾಮಯ್ಯ ಅವರು ಮತ್ತೆ ಅದೇ ಕವಡಿಮಟ್ಟಿ ಗ್ರಾಮಕ್ಕೆ ಆಗಮಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮತ್ತೊಮ್ಮೆ ಪ್ರಚಲಿತಗೊಂಡಿದ್ದಾರೆ ತಂದೆಯ ಹಾದಿಯಲ್ಲಿ ನಡೆಯುವುದಾಗಿ ತಿಳಿಸಿದ್ದಾರೆ ಇನ್ನು ಕಾರ್ಯಕ್ರಮ ನಿಮಿತ್ತವಾಗಿ ಸಿಂದಗಿಯ ಕಣ್ಣಗುಡ್ಡಿಹಾಳ ಗ್ರಾಮಕ್ಕೆ ಆಗಮಿಸಿ, ತದ ನಂತರ ಹೊಸಪೇಟೆಗೆ ಹೋಗುವ ಮಾರ್ಗ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸೋಮವಾರ ಕುರುಬ ಸಮಾಜದವರು ಆಯೋಜಿ ಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದರು.
ಕವಡಿಮಟ್ಟಿ ಗ್ರಾಮದ ಹಾಗೂ ಬೀದರ್ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸಂಗಮೇಶ್ ವಾಲಿಕಾರ್ ಅವರು ಶ್ರೀಯುತ ಯತೀಂದ್ರ ಸಿದ್ದರಾಮಯ್ಯ ಅವರನ್ನು ಊರಿನ ಗ್ರಾಮ ಸ್ಥ ರಿಗೆ ಭೇಟಿ ಮಾಡಿಸಲು ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಅಲಾರ್ಪಣೆ ಮಾಡುವುದಾಗಿ ಮನವಿ ಮಾಡಿಕೊಂಡಾಗ ಯತಿಂದ್ರ ಸಿದ್ದರಾಮಯ್ಯ ಅವರು ಅತ್ಯಂತ ಉತ್ಸಾಹದಿಂದ ಒಪ್ಪಿಕೊಂಡು ರಾತ್ರಿಯಾದರೂ ಪರವಾಗಿಲ್ಲ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇನೆ ಎಂದು ವಾಗ್ದಾನ ಮಾಡಿ ಕವಡಿಮಟ್ಟಿ ಗ್ರಾಮಕ್ಕೆ ಆಗಮಿಸಿದ್ದರು. ಇನ್ನು ಅವರು ಬರುತ್ತಿದ್ದಂತೆ ಭರ್ಜರಿ ಡೊಳ್ಳು ಹಾಗೂ ಸಂಗೀತ ಮೂಲಕ ಬರಮಾಡಿಕೊಂಡರು.
ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಂತೀಂದ್ರ ಸಿದ್ದರಾಮಯ್ಯ ನಮಸ್ಕರಿಸಿದರು. ಗ್ರಾಮಸ್ಥರು ಯತೀಂದ್ರ ಅವರಿಗೆ ಕುರಿ ಮರಿ ಹಾಗೂ ಕಂಬಳಿ ಹೊದಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನೀಡಿ ಸನ್ಮಾನಿಸಿ ಗೌರವಿಸಿ ತಮ್ಮ ಅಭಿಮಾನ ಮೆರೆದರು.
ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ ಅತ್ಯಂತ
ಪರಾಕ್ರಮಿ. ಬ್ರಿಟಿಷರು ರಾಣಿ ಚನ್ನಮ್ಮನ ಆಸ್ಥಾನದ ಮೇಲೆ ದಾಳಿ ನಡೆಸಿದಾಗ ರಾಯಣ್ಣನ ಹೋರಾಟ ದಿಂದ, ಶೌರ್ಯದಿಂದ ಗೆಲುವು ಸಾಧ್ಯವಾಯಿತು. ಎರಡನೇ ಯುದ್ಧದಲ್ಲಿ ಸೋಲಾದರೂ ಬ್ರಿಟಿಷರ ಕೈಗೆ ಸಿಗದೆ ತಪ್ಪಿಸಿಕೊಂಡ ರಾಯಣ್ಣ ಗೆರಿಲ್ಲಾ ಸೈನ್ಯ ಕಟ್ಟಿ, ಗೆರಿಲ್ಲಾ ಯುದ್ಧ ಮಾಡಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದರು. ಇದರಿಂದ ಬ್ರಿಟಿಷರು ನೆಮ್ಮದಿ ಕೆಡಿಸಿಕೊಂಡಿದ್ದರು.
ಆದರೆ ನಮ್ಮವರೇ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟರು ಎಂದು ಸುದ್ದಿಗಾರರ ಜತೆ ಮಾತನಾಡಿದರು. ಬೆಂಗಳೂರು ಸ್ಲಂ ಬೋರ್ಡ್ ನಿರ್ದೇಶಕ ರಾಮಕೃಷ್ಣ ರೊಳ್ಳಿ, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ಬೀದರ ವಿಶ್ವವಿದ್ಯಾಲಯ ಸದಸ್ಯ ಸಂಗಮೇಶ ವಾಲಿಕಾರ, ಗ್ರಾಮದ ದುರೀಣರಾದ ಚಂದಾಲಿಂಗ್ ಹಂಡ್ರಗಲ್ಸ್ ಪುರಸಭೆ ಅಧ್ಯಕ್ಷರ ಮೈಬುಬೂ ಗೋಸಂಗಿ, ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷರಾದ ಕಾಮರಾಜ್ ಬಿರಾದಾರ್, ಸಿದ್ದು ಪೂಜಾರಿ, ಬಸಲಿಂಗಪ್ಪ ಮೇಟಿ, ಸಾಹೇಬಗೌಡ ಬಿರಾದಾರ, ಹಣಮಂತ ಹಂಡ್ರಗಲ್ ಮಾಳಪ್ಪ ಬಳಬಟ್ಟಿ, ಬಸವರಾಜ ಗುಳಬಾಳ, ಸಂಗಮೇಶ ಮೇಲಿಮನಿ ಭೀಮಣ್ಣ ಪೂಜಾರಿ, ಸೇರಿದಂತೆ ರವಿ ಮೇಟಿ ನೂರಾರು ಜನರಿದ್ದರು.