ಬೆಂಗಳೂರು: “ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಆಗಿರುವುದರಿಂದ ನಾವು ಬೆಂಗಳೂರು ನಗರದ ಭಾಗ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತಿದೆ” ಹೀಗಂತ ಸಂತಸ ವ್ಯಕ್ತಪಡಿಸಿದವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್.
ರಾಮನಗರ ಜಿಲ್ಲೆಯವರಾದರೂ ನಾವು ಬೆಂಗಳೂರು ಗ್ರಾಮಾಂತರ ಎಂದು ಹಿಂದೆ ಹೇಳಿಕೊಳ್ಳುತ್ತಿದ್ದೆವು. ನಾವು ಬೆಂಗಳೂರು ಜಿಲ್ಲೆಯವರೇ. ಇದೀಗ ‘ಬೆಂಗಳೂರು ದಕ್ಷಿಣ’ ಎಂದು ಮರು ನಾಮಕರಣ ಮಾಡಿರುವುದರಿಂದ ನಮ್ಮ ಹಳೆಯ ಜಿಲ್ಲೆಗೆ ಸೇರ್ಪಡೆ ಆದಂತೆ ಆಗಿದೆ. ಆಡಳಿತಾತ್ಮಕ ದೃಷ್ಟಿಯಿಂದಲೂ ಯಾವುದೇ ಸಮಸ್ಯೆ ಇಲ್ಲ. ರಾಮನಗರವು ತಾಲ್ಲೂಕು ಆಗಿಯೇ ಉಳಿದುಕೊಳ್ಳುತ್ತದೆ. ಜಿಲ್ಲಾ ಕೇಂದ್ರ ಮಾತ್ರ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣವಾಗಿದೆ.