BANGALORE ಉಚಿತ ಆರೋಗ್ಯ ತಪಾಸಣಾ ಶಿಬಿರ: ಮಹಿಳಾ ಸಂಘಗಳ ಒಕ್ಕೂಟದಿಂದ ಹೃದಯಸ್ಪರ್ಶಿ ಕಾರ್ಯಕ್ರಮ

Bhima Samskruthi
By -
0


ಬೆಂಗಳೂರು: ಆದರ್ಶಿನಿ ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷರಾದಂತ SB ರಾಜೇಶ್ವರಿ ಹಾಗೂ ಸಂಘದ ಮೆಂಬರ್ ಸಮ್ಮುಖದಲ್ಲಿ. Or ಆಶ್ರಯದಲ್ಲಿ “ಇನ್ನರ್ ವೀಲ್ ಕ್ಲಬ್ ಇಂಡಿಯನ್ ಕ್ಯಾನ್ಸರ್ ಸೊಸೈಟಿ” ಸಹಯೋಗದೊಂದಿಗೆ **ಉಚಿತ ಆರೋಗ್ಯ ತಪಾಸಣಾ ಶಿಬಿರ**ವನ್ನು ನವೆಂಬರ್ 9, 2025ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರು ನಗರದಲ್ಲಿನ ಎಫ್ ಬ್ಲಾಕ್. ಚಾಮುಂಡಿ ನಗರ ಹೋಸಕೆರೇಹಳ್ಳಿ ಪ್ರದೇಶದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಮಹಿಳೆಯರ ಆರೋಗ್ಯದ ಪ್ರಾಥಮಿಕ ತಪಾಸಣೆ, ಕ್ಯಾನ್ಸರ್ ತಪಾಸಣೆ, ಹಾಗೂ ಆರೋಗ್ಯ ಜಾಗೃತಿ ಕುರಿತು ಮಾರ್ಗದರ್ಶನ ನೀಡಲಾಗುವುದು. **ಎದೆ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಹಾಗೂ ಬಾಯಿ ಕ್ಯಾನ್ಸರ್ ತಪಾಸಣೆ**ಗಳನ್ನು ಸ್ಥಳದಲ್ಲೇ ಪರಿಣಿತ ವೈದ್ಯರಿಂದ ಮಾಡಲಾಗುತ್ತದೆ.

35 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ. ಉಚಿತವಾಗಿ ಲಭ್ಯವಾಗುವ ಈ ಸೇವೆಯು ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಒಂದು ಮಹತ್ತರ ಹೆಜ್ಜೆಯಾಗಿದೆ.

---ವರದಿ. ಗಣೇಶ್
Tags:

Post a Comment

0Comments

Post a Comment (0)