ಹಿಂದಿಗೆ ರಿಮೇಕ್ ಆಗ್ತಿದೆ ಕನ್ನಡದ ಈ ಜನಪ್ರಿಯ ಧಾರಾವಾಹಿ
By -
March 26, 2024
0
ಸೀತಾ ರಾಮʼ ಸೀರಿಯಲ್‌ನ ಹಿಂದಿ ರಿಮೇಕ್‌ಗೆ ‘ಮೇ ಹೂ ಸಾತ್ ತೆರೆ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇದು ಝೀ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸದ್ಯ ಯಾವಾಗಿನಿಂದ ಟೆಲಿಕಾಸ್ಟ್ ಆಗಲಿದೆ ಎನ್ನುವ ಮಾಹಿತಿ ಗೊತ್ತಾಗಿಲ್ಲ. ಕನ್ನಡದಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ರಾಮ್ ಆಗಿ ಗಗನ್ ಚಿನ್ನಪ್ಪ ನಟಿಸುತ್ತಿದ್ದಾರೆ. ಇನ್ನು ಧಾರಾವಾಹಿಯ ಪ್ರಧಾನ ಆಕರ್ಷಣೆಯಾದ ಸಿಹಿ ಪಾತ್ರದಲ್ಲಿ ಪುಟಾಣಿ ರೀತು ಸಿಂಗ್ ಮೋಡಿ ಮಾಡಿದ್ದಾರೆ. ಇವರ ಜತೆಗೆ ಪೂಜಾ ಲೋಕೇಶ್, ಅಶೋಕ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ
Tags: